ಆತ್ಮೀಯ ಪಾಲಕರೇ 2021-22 ನೇ ಸಾಲಿನ ತರಗತಿಗಳನ್ನು ಆನ್ಲೈನ್ ಅಥವಾ ಆಫ್ಲೈನ್ ವರ್ಗಗಳನ್ನು ದಿನಾಂಕ 01 ಜುಲೈ 2021 ರಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ತಮ್ಮ ಮಕ್ಕಳ ದಾಖಲಾತಿಯನ್ನು ಶಾಲೆಗೆ ಬಂದು ಖಚಿತಪಡಿಸಿಕೊಳ್ಳಿರಿ. ಒಂದನೇ ವರ್ಗಕ್ಕೆ ಹೊಸದಾಗಿ ದಾಖಲಾತಿ ಮಾಡಿಸಬೇಕು, ಮತ್ತು ಮಾಧ್ಯಮ ಬದಲಾವಣೆ ಬಯಸುವವರು ಹೊಸದಾಗಿ ದಾಖಲಾತಿ ಮಾಡಿಸಬೇಕು. ಹಾಗೆಯೇ 8 ಮತ್ತು 9ನೇ ತರಗತಿಯ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಸಹ ಹೊಸದಾಗಿ ದಾಖಲಾತಿ ಫಾರ್ಮ್ ತುಂಬಬೇಕು. ದಿನಾಂಕ 30-7-2021 ರ ಒಳಗಾಗಿ ದಾಖಲಾತಿಯನ್ನು ಖಚಿತಪಡಿಸಿಕೊಳ್ಳಬೇಕು.
ದಾಖಲಾತಿ ಮಾಡಿಸಲು ಬೇಕಾಗುವ ದಾಖಲೆಗಳು
-----------------------------------------------------------------
ಜನನ ಪ್ರಮಾಣ ಪತ್ರ (ಒಂದನೇ ತರಗತಿಗೆ ಮಾತ್ರ)
ಮಗುವಿನ ಪಾಸ್ಪೋರ್ಟ್ ಸೈಜ್ ಭಾವಚಿತ್ರ 4.
ತಂದೆ-ತಾಯಿ ಮಗುವಿನ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ.
ಮಗುವಿನ ಜಾತಿ ಹಾಗೂ ಆದಾಯ ಪ್ರಮಾಣಪತ್ರ ಝರಾಕ್ಸ್ ಪ್ರತಿ.
ಮಗುವಿನ ಬ್ಯಾಂಕ್ ಪಾಸ್ಬುಕ್ ಝರಾಕ್ಸ್ ಪ್ರತಿ.
ಹಿಂದಿನ ವರ್ಷದ ಅಂಕಪಟ್ಟಿ ಝರಾಕ್ಸ್ ಪ್ರತಿ.
ಮಗುವಿನ ವರ್ಗಾವಣೆ ಪ್ರಮಾಣ ಪತ್ರ (ಬೇರೆ ಶಾಲೆಯಿಂದ ಬಂದರೆ ಮಾತ್ರ)
By President & Head Master
Vhs School jamkhandi

Comments
Post a Comment